ಚಿಕ್ಕಬಳ್ಳಾಪುರ: ರೈತರಲ್ಲಿ ಕೃಷಿ ತಿಳಿವಳಿಕೆ ಮೂಡಿಸಲು ಕೃಷಿ ವಸ್ತು ಪ್ರದರ್ಶನ - Agricultural materials show
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಸಹಯೋಗದ ಸಂಯುಕ್ತಾಶ್ರದಲ್ಲಿ ಸಮಗ್ರ ಕೃಷಿ ಅಭಿಯಾನ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಳೆ ಆಧಾರಿತ ಬೆಳೆ ಬೆಳೆಯುವ ಸಣ್ಣ ರೈತರು ಮಳೆಯಿಲ್ಲದೆ ಬೇಸಾಯವನ್ನು ಬಿಡುವ ಪರಿಸ್ಥಿತಿ ಬಂದೊದಿಗಿದ್ದು, ಸಾವಯವ ಬೇಸಾಯ ಪದ್ದತಿಯ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಈ ಕೃಷಿ ವಸ್ತುಗಳನ್ನು ಪ್ರದರ್ಶನ ನಡೆಸಿ ರೈತರಿಗೆ ತಿಳುವಳಿಕೆ ನೀಡಲಾಯಿತು.ಇನ್ನೂ ಕ್ಷೇತ್ರದ ಎಲ್ಲಾ ರೈತರು ತಮ್ಮ ತಮ್ಮ ಭೂಮಿಯಲ್ಲಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಮಣ್ಣಿಗೆ ಅನುಗುಣವಾಗಿ ವೈಜ್ಞಾನಿಕ ಬೆಳೆಗಳನ್ನು ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಬೇಕೆಂದು ಉಪಸಭಾಧ್ಯಕ್ಷರು ರೈತರಿಗೆ ಸಲಹೆಯನ್ನು ನೀಡಿದರು.