ಕರ್ನಾಟಕ

karnataka

ETV Bharat / videos

ಪೀಠಾಧಿಕಾರಿಯಾದರೂ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾದ ಗುರುಲಿಂಗಸ್ವಾಮಿ...! - ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾದ ಅಕ್ಕಿಮಠದ ಗುರುಲಿಂಗಸ್ವಾಮಿ

By

Published : Jan 7, 2021, 1:10 AM IST

ಹಾವೇರಿ ಸಮೀಪದ ಅಗಡಿ ಗ್ರಾಮದಲ್ಲಿರುವ ಅಕ್ಕಿಮಠ ಶತಮಾನಗಳ ಇತಿಹಾಸವಿರುವ ಮಠ. ಈ ಮಠಕ್ಕೆ ಕಳೆದ ಏಳು ವರ್ಷಗಳ ಹಿಂದೆ ಪೀಠಾಧಿಕಾರಿಯಾಗಿ ಆಯ್ಕೆಯಾದವರು ಗುರುಲಿಂಗಸ್ವಾಮಿ. ಗುರುಲಿಂಗಶ್ರೀಗಳು ತಮ್ಮದೇ ಆದ ವಿಶಿಷ್ಟ ನಡೆಯಿಂದ ಸಮಾಜಕ್ಕೆ ಹತ್ತೀರವಾದವರು. ಈ ಸ್ವಾಮಿಜಿ ತಮ್ಮ ಮಠದಲ್ಲಿರುವ ಹಸುಗಳ ಹಾಲನ್ನ ತಾವೇ ಕರೆಯುತ್ತಾರೆ. ಅಲ್ಲದೆ ಟ್ರ್ಯಾಕ್ಟರ್ ಏರಿ ಜಮೀನಿಗೆ ತೆರಳಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಮಠಕ್ಕೆ ಭಕ್ತರು ನೀಡಿದ 36 ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆಯುತ್ತಾರೆ. ಜಮೀನಿನಲ್ಲಿ ಶ್ರೀಗಳು ಎಲ್ಲ ಕೃಷಿಕರಂತೆ ಕೃಷಿ ಕಾರ್ಯದಲ್ಲಿ ನಿರತರಾಗುತ್ತಾರೆ.

ABOUT THE AUTHOR

...view details