ಮಲೆನಾಡಲ್ಲಿ ಮತ್ತೆ ಬಿರುಸುಗೊಂಡ ಮಳೆ: ಆತಂಕದಲ್ಲಿ ಜನ - ಅವಾಂತರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡುವ ನೀಡಿದ್ದ ಮಳೆ ಈಗ ಮತ್ತೆ ತನ್ನ ಆರ್ಭಟ ಶುರುಮಾಡಿದೆ. ಇಂದು ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮಲೆನಾಡಿಗರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯ ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಜಾವಳಿ, ಕುದುರೆಮುಖ ಭಾಗದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಇತ್ತೀಚೆಗೆ ವಾರಗಳ ಕಾಲ ಎಡೆಬಿಡದೆ ಸುರಿದಿದ್ದ ಮಳೆಯಿಂದ ನೂರಾರು ಮನೆಗಳು ಮತ್ತು ತೋಟಗಳು ಕೊಚ್ಚಿ ಹೋಗಿದ್ದವು. ಈಗ ಮತ್ತೆ ಮಳೆ ಅದೇ ರೀತಿಯ ಅವಾಂತರ ಸೃಷ್ಟಿಸದಿರಲಿ ಎಂದು ಜಿಲ್ಲೆಯ ಜನರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.