ಚಕ್ಕಡಿ ಏರಿ ಸ್ವ ಕ್ಷೇತ್ರಕ್ಕೆ ಬಂದ ಕೌರವ: ನೂತನ ಸಚಿವರಿಗೆ ಅದ್ಧೂರಿ ಸ್ವಾಗತ - b c patil got minister post visited hirekeruru
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಬಿ.ಸಿ.ಪಾಟೀಲ್ ವಿಧಾನಸೌಧಕ್ಕೆ ಚಕ್ಕಡಿಯಲ್ಲಿ ಹೋಗುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಮೊದಲ ಭಾರಿಗೆ ಸಚಿವರಾಗಿ ಕ್ಷೇತ್ರಕ್ಕೆ ಬಂದ ಪಾಟೀಲ್ರವರಿಗೆ ಸಿಂಗರಿಸಿದ ಚಕ್ಕಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅಭಿಮಾನಿಗಳು ಬರಮಾಡಿಕೊಂಡರು. ಕೃಷಿ ಸಚಿವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ. ಬಣಕಾರ್ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಉಭಯ ನಾಯಕರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಯಘೋಷಹಾಕಿ ಸಂಭ್ರಮಿಸಿದರು.