ಏರೋ ಇಂಡಿಯಾ 2021 ಚಾಲನೆಗೆ ಕ್ಷಣಗಣನೆ : ಟ್ರಾಫಿಕ್ ದಟ್ಟಣೆ
ಐತಿಹಾಸಿಕ 13ನೇ ಆವೃತ್ತಿಯ ಏರೋ ಇಂಡಿಯಾ 2021ಗೆ ಕ್ಷಣಗಣನೆ ಆರಂಭವಾಗಿದ್ದು, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಏರೋ ಇಂಡಿಯಾ 2021 ಉದ್ಘಾಟಿಸಲಿದ್ದಾರೆ.. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಫೆ.3ರಿಂದ 5ರ ತನಕ ಏರ್ ಶೋ ನಡೆಯಲಿದೆ. ಏರ್ ಶೋ ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವಿದ್ದು, ಬೆಳ್ಳಂಬೆಳಗ್ಗೆಯೇ ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿಯಿಂದಲೇ ಟ್ರಾಫಿಕ್ ಜಾಮ್ ಶುರುವಾಗಿದೆ. ಸಾರ್ವಜನಿಕರು ಏರ್ ಶೋ ವೀಕ್ಷಿಸಲು ಕೋವಿಡ್ ಪರೀಕ್ಷೆಯನ್ನ ಕಡ್ಡಾಯವಾಗಿ ಮಾಡಿಸಿಕೊಂಡೆ ಪ್ರವೇಶ ಪಡೆಯಬೇಕು ಎಂದು ಭಾರತ ಸರ್ಕಾರ ಕಡ್ಡಾಯಗೊಳಿಸಿದೆ.. 9.30ಕ್ಕೆ ಪ್ರಾರಂಭವಾಗುವ ಈ ಅಂತಾರಾಷ್ಟ್ರಿಯ ಸಮಾರಂಭಕ್ಕೆ ವಿಶ್ವದ ವಿವಿಧ ರಾಷ್ಟ್ರಗಳಿಂದ ರಕ್ಷಣಾ ಪ್ರತಿನಿಧಿಗಳು ಈಗಾಗಲೇ ಆಗಮಿಸಿದ್ದಾರೆ..