ಆದಿವಾಸಿ ಮಹಿಳೆಯಿಂದ 'ಏಳ್ಮಲೆ ಮಾದೇವ' ಹಾಡು: ವಿಡಿಯೋ - Adivasi Woman's Song on Malemadeswara mysore news
🎬 Watch Now: Feature Video
ಮೈಸೂರು: ಕೂಲಿ ಕೆಲಸಕ್ಕೆ ಬಂದು ಸಹಪಾಠಿಗಳೊಂದಿಗೆ ಊಟ ಮಾಡುತ್ತಿದ್ದ ಆದಿವಾಸಿ ಮಹಿಳೆ, ಮಲೆಮಾದೇಶ್ವರನ ಕುರಿತಾಗಿ ಹಾಡಿರುವ ಹಾಡೊಂದು ಇದೀಗ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನ ಪ್ರದೇಶದ ಜಮೀನಿನಲ್ಲಿ ಜೇನುಕುರುಬ ಮಹಿಳೆ ಮಣಿಯಮ್ಮ ಕೂಲಿ ಕೆಲಸ ಮಾಡುತ್ತಿದ್ದರು. ಊಟಕ್ಕಾಗಿ ಅವರು ಸಹಪಾಠಿಗಳೊಂದಿಗೆ ಕುಳಿತಾಗ ಹಾಡಿದ 'ಕರುಳಿನ ಕುಡಿಯ ಕರುಣಿಸು ದೇವ ಏಳ್ಮಲೆ ಮಾದೇವ' ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಎನ್ಜಿಒ ಸಂಸ್ಥೆಯ ಮಹಿಳೆಯೊಬ್ಬರು ಅಲ್ಲಿಗೆ ಬಂದಾಗ, ಜೇನುಕುರುಬ ಮಹಿಳೆಯರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ ಹಾಡನ್ನು ಹಾಡುವಂತೆ ವಿನಂತಿಸಿದ್ದಾರೆ. ಆಗ ಮಣಿಯಮ್ಮ ತಮ್ಮ ಕಂಠಸಿರಿಯಲ್ಲಿ ಸುಮಧುರವಾಗಿ ಮಾದೇಶ್ವರ ಕುರಿತಾಗಿ ಭಕ್ತಿಗೀತೆ ಹಾಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Mar 11, 2021, 7:36 PM IST