'ಐ ಮಿಸ್ ಹಿಮ್ ಸೋ ಮಚ್': ಬಹುಭಾಷಾ ನಟಿ ಜಯಪ್ರದಾ ಭಾವುಕ - ಪುನೀತ್ ನಿವಾಸಕ್ಕೆ ನಟಿ ಜಯಪ್ರದಾ ಭೇಟಿ
ಸ್ಯಾಂಡಲ್ವುಡ್ನ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸಕ್ಕೆ ಬಹುಭಾಷಾ ನಟಿ ಜಯಪ್ರದಾ ಭೇಟಿ ನೀಡಿದರು. 'ರಾಜ್ ಕುಟುಂಬದಲ್ಲಿ ನಾನು ಕೂಡ ಸದಸ್ಯಳಾಗಿದ್ದೆ. ತುಂಬಾ ಚಿಕ್ಕವಯಸ್ಸಿನಲ್ಲೇ ನಮ್ಮನ್ನೆಲ್ಲಾ ಬಿಟ್ಟು ಪುನೀತ್ ಹೋಗಿರೋದು ದುರಂತ. ಮನಸ್ಸಿಗೆ ತುಂಬಾ ಕಷ್ಟ ಆಗ್ತಿದೆ. ಅಪ್ಪು ಸಾವು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ' ಎಂದು ಭಾವುಕರಾದರು.