ಅಪ್ಪು ಅಮರ ಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ: ಶಿವರಾಜ್ ಕುಮಾರ್ - Shivraj Kumar reacts about Demand for ‘Padma Shri’ award for Puneeth
ನಟ ಪುನೀತ್ ರಾಜ್‍ಕುಮಾರ್ ನಿಧನರಾಗಿ 11 ದಿನ ಕಳೆದಿವೆ. ಈ ಹಿನ್ನೆಲೆಯಲ್ಲಿ ಇಂದು ಅವರ ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ಸಲ್ಲಿಸಿ ನಂತರ ಮಾತನಾಡಿದ ನಟ ಶಿವರಾಜ್ ಕುಮಾರ್, ಅಪ್ಪುನನ್ನ ಕಳೆದುಕೊಂಡಿದ್ದೇವೆ ಎಂದು ಈಗಲೂ ನಂಬಲು ಆಗುತಿಲ್ಲ. ತುಂಬಾ ನೋವಾಗುತ್ತಿದೆ ಎಂದರು. ಬಳಿಕ ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಅವನು ಅಮರ ಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ' ಎಂದರು.