ಹುಬ್ಬಳ್ಳಿಯಲ್ಲಿ ನಟ ಶಂಕರನಾಗ್ ಜನ್ಮದಿನ ಆಚರಣೆ - ಹುಬ್ಬಳ್ಳಿಯಲ್ಲಿ ನಟ ಶಂಕರನಾಗ್ ಹುಟ್ಟುಹಬ್ಬ ಆಚರಣೆ ಸುದ್ದಿ
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಾಯಕ ನಟ ದಿ. ಶಂಕರನಾಗ್ ಅವರ 63ನೇ ಜನ್ಮ ದಿನದ ಹಿನ್ನೆಲೆ ಹುಬ್ಬಳ್ಳಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ನಗರದ ಚನ್ನಮ್ಮ ವೃತ್ತದಲ್ಲಿ ಕರಾಟೆ ಕಿಂಗ್ ಶಂಕರನಾಗ್ ಅವರ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಿ ಅವರ ಹೆಸರನ್ನು ಹುಬ್ಬಳ್ಳಿಯ ಯಾವುದಾದರೂ ರಸ್ತೆಗೆ ನಾಮಕರಣ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನೂರಾರು ಆಟೋ ಚಾಲಕರು ಹಾಗೂ ವಿವಿಧ ಡ್ಯಾನ್ಸ್ ಅಕಾಡೆಮಿ ಸದಸ್ಯರು ಭಾಗಿಯಾಗಿದ್ದರು.