ಅಭಿಮಾನಿಗಳಿಂದ ಆಟೋರಾಜ ಶಂಕ್ರಣ್ಣನ 63ನೇ ಜನ್ಮದಿನ ಆಚರಣೆ - ಯಾದಗಿರಿಯಲ್ಲಿ ನಟ ಶಂಕರ್ನಾಗ್ ಜನ್ಮದಿನ ಆಚರಣೆ
ಯಾದಗಿರಿ: ಕನ್ನಡದ ಮೇರುನಟ 'ಆಟೋರಾಜ' ಶಂಕರ್ನಾಗ್ ಅವರ ಜನ್ಮದಿನವನ್ನು ಯಾದಗಿರಿಯ ಆಟೋ ಚಾಲಕರ ಸಂಘ ವತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಅಭಿಮಾನಿಗಳು ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರ ಪೋಲಿಸ್ ಠಾಣೆ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಈ ವೇಳೆ ಸನ್ಮಾನ ಮಾಡಲಾಯ್ತು. ನಂತರ ಅಭಿಮಾನಿಗಳಿಗೆ ಹಾಗು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರೆವೇರಿತು.