ಚಿತ್ರಮಂದಿರಕ್ಕೆ ಶೇ.100ರಷ್ಟು ಭರ್ತಿಗೆ ಅವಕಾಶ.. ಸಿಎಂ ಬಿಎಸ್ವೈಗೆ ಧನ್ಯವಾದ ಎಂದ 'ಯುವರತ್ನ'.. - ಪುನೀತ್ ರಾಜ್ಕುಮಾರ್
ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿ ನಿಯಮ ಕೈಬಿಟ್ಟು ಏಪ್ರಿಲ್ 7ರವರೆಗೆ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿದ ಬೆನ್ನಲ್ಲೇ ನಟ ಪುನೀತ್ ರಾಜ್ಕುಮಾರ್ ಸಂತಸ ಹಂಚಿಕೊಂಡಿದ್ದಾರೆ. ಸರ್ಕಾರದ ಆದೇಶ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಕೊರೊನಾ ನಿಯಮ ಪಾಲನೆ ಮೂಲಕ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.