RR ನಗರ ಉಪಚುನಾವಣೆ: ಮತ ಚಲಾಯಿಸಿದ ನಟ ಪ್ರೇಮ್ - RRnagar election 2020
ಬೆಂಗಳೂರು: ಕುಟುಂಬ ಸಮೇತ ಆಗಮಿಸಿದ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಮತಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ನಾವು ಮತದಾನ ಮಾಡಿಲ್ಲ ಅಂದ್ರೆ ನಮ್ಮ ಅಭಿವೃದ್ಧಿಗೆ ಹಿನ್ನಡೆಯಾಗುತ್ತೆ. ಕ್ಯಾನ್ಸರ್ಗಿಂತಲೂ ಕೋವಿಡ್ ರೋಗ ಮಾರಕ ಅಲ್ಲ. ಸರ್ಕಾರ ಎಲ್ಲ ರೀತಿಯಲ್ಲೂ ಸುರಕ್ಷತಾ ವ್ಯವಸ್ಥೆಯನ್ನ ಮಾಡಿದೆ. ಯಾರೂ ಆತಂಕ ಪಡುವುದು ಬೇಡ. ಎಲ್ಲರೂ ಮುಂಜಾಗ್ರತೆಯನ್ನ ವಹಿಸಿ ಮತದಾನ ಮಾಡಿ ಎಂದು ಪ್ರೇಮ್ ಮನವಿ ಮಾಡಿದರು.