ಸೆಟ್ನಲ್ಲಿ ಸಿಗರೇಟ್ ಸೇದೋರನ್ನೇ ಹೊರಗೆ ಕಳಿಸ್ತೀವಿ: ಡ್ರಗ್ಸ್ ವಿಚಾರ ಕುರಿತು ನಟ ಕರಿಸುಬ್ಬು ಹೇಳಿಕೆ - Actor karisubbu
ಡ್ರಗ್ಸ್ ಮಾಫಿಯಾ ಹಿನ್ನೆಲೆ ಈಗಾಗಲೇ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಡ್ರಗ್ಸ್ ಬಗ್ಗೆ ಒಂದೊಂದು ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಬಗ್ಗೆ ಹಿರಿಯ ನಟ ಕರಿಸುಬ್ಬು, ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಸಿಗರೇಟ್ ಸೇದುವರನ್ನೇ ಹೊರಗಡೆ ಕಳುಹಿಸುತ್ತೀವಿ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾನು ವೀಕ್ ಎಂಡ್ ಪಾರ್ಟಿಯನ್ನ ಹೆಂಡತಿ ಮಕ್ಕಳ ಜೊತೆ ಮಾಡ್ತೀನಿ. ನನ್ನ 50 ವರ್ಷಗಳ ಜರ್ನಿಯಲ್ಲಿ ಡ್ರಗ್ಸ್ ಅನ್ನೋದು ಗಮನಕ್ಕೆ ಬಂದಿಲ್ಲ. ಯಾರೋ ಒಬ್ಬರು ಮಾಡಿರೋದಿಕ್ಕೆ ಇಡೀ ಚಿತ್ರರಂಗವನ್ನ ಹೊಣೆ ಮಾಡೋದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.