ನನ್ನ ಕಾರಿನ ಹಿಂದೆ ಬರಬೇಡಿ.. ಹೀಗಂತ ದರ್ಶನ್ ಅಭಿಮಾನಿಗಳಿಗೆ ಹೇಳಿದ್ಯಾಕೆ? - ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ
ನಿನ್ನೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ 'ರಾಬರ್ಟ್' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ನಟ ದರ್ಶನ್, ಯಾವತ್ತು ನನ್ನ ಕಾರಿನ ಹಿಂದೆ ಬರಬೇಡಿ. ನಾವು ವೇಗವಾಗಿ ಹೋಗುತ್ತಿರುತ್ತೇವೆ. ಒಂದು ವೇಳೆ ಅಪಘಾತವಾದರೆ ಕುಟುಂಬದವರು ಸಾಕಷ್ಟು ನೋವು ಅನುಭವಿಸುತ್ತಾರೆ. ಬದುಕಿದ್ರೆ ಇನ್ನೊಂದು ಸಾರಿ ನನ್ನನ್ನು ನೋಡಬಹುದು. ಹಾಗಾಗಿ, ನಿಮ್ಮ ಸುರಕ್ಷತೆ ಕಡೆ ಹೆಚ್ಚಿನ ಗಮನ ಇರಲಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.