ಕೊರೊನಾ ಸಂಕಷ್ಟ: ಬಡ ಕಲಾವಿದರ ನೆರವಿಗೆ ನಿಂತ ನಟ ಚೇತನ್ - ಕಲಾವಿದರು ಹಾಗೂ ತಂತ್ರಜ್ಞರಿಗೆ ಕರೆ ಮಾಡಿ ಅವರ ಅಕೌಂಟ್ ನಂಬರ್ ಪಡೆದ ಚೇತನ್
ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಬಡ ಕಲಾವಿದರ ಕಷ್ಟಕ್ಕೆ ನಟ ಚೇತನ್ ಸ್ಪಂದಿಸಿದ್ದಾರೆ. ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಜೊತೆಗೆ ಸರ್ಕಾರ ಅಸಂಘಟಿತ ಸಾವಿರಾರು ಕಾರ್ಮಿಕರಿಗೆ ನೆರವು ನೀಡಿದೆ. ಆದ್ರೆ ಚಿತ್ರರಂಗದ ಕಾರ್ಮಿಕರು ಹಾಗೂ ಸಣ್ಣ ಕಲಾವಿದರಿಗೆ ಸರ್ಕಾರ ಯಾವುದೇ ನೆರವು ನೀಡಿಲ್ಲ. ಈ ನಿಟ್ಟಿನಲ್ಲಿ ನಟ ಚೇತನ್ ಬಡ ಕಲಾವಿದರಿಗೆ 7 ಲಕ್ಷ ರೂಪಾಯಿ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಪ್ರತಿಯೊಬ್ಬರ ಅಕೌಂಟ್ಗೆ ಎರಡು ಸಾವಿರ ರೂ. ಹಣವನ್ನು ಚೇತನ್ ಹಾಕಲಿದ್ದು, ಸ್ವತಃ ಚೇತನ್ ಕಲಾವಿದರು ಹಾಗೂ ತಂತ್ರಜ್ಞರಿಗೆ ಕರೆ ಮಾಡಿ ಅವರ ಅಕೌಂಟ್ ನಂಬರ್ ಪಡೆಯತ್ತಿದ್ದಾರೆ.