ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪ: ಪ್ರಯಾಣಿಕರನ್ನು ಥಳಿಸಿದ ಸಾರಿಗೆ ಸಿಬ್ಬಂದಿ - ಹಾವೇರಿ ಸುದ್ದಿ
ಹಾವೇರಿ: ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಪ್ರಯಾಣಿಕರನ್ನು ಸಾರಿಗೆ ಸಿಬ್ಬಂದಿಯೇ ಥಳಿಸಿರುವ ಘಟನೆ ಜಿಲ್ಲೆಯ ಹಾನಗಲ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಂಡಕ್ಟರ್ ನಾಗರಾಜ ಮತ್ತು ಡ್ರೈವರ್ ರಾಮಣ್ಣ ಎಂಬುವರು ಪ್ರಯಾಣಿಕರಿಗೆ ಥಳಿಸಿದ್ದಾರೆ ಎನ್ನಲಾಗ್ತಿದೆ. ಇಬ್ಬರು ಪ್ರಯಾಣಿಕರು ಮದ್ಯಪಾನ ಮಾಡಿದ್ದು, ಬಸ್ ಸಂಚಾರದ ಮಾರ್ಗದಲ್ಲಿ ಬದಲಾವಣೆ ವಿಚಾರದಲ್ಲಿ ಕಿರಿಕ್ ಮಾಡಿದ್ದರಂತೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.