ಕರ್ನಾಟಕ

karnataka

ETV Bharat / videos

ಚಲಿಸುತ್ತಿದ್ದ ಬೈಕ್​ಗೆ ಆಕಸ್ಮಿಕ ಬೆಂಕಿ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು - Accidental fire to a moving bike

By

Published : Dec 8, 2019, 8:19 PM IST

ಕಾರವಾರ: ಚಲಿಸುತ್ತಿದ್ದ ಬೈಕ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೈಕ್ ಸಂಪೂರ್ಣ ಸುಟ್ಟುಹೋಗಿರುವ ಘಟನೆ ಕಾರವಾರ ತಾಲ್ಲೂಕಿನ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಗೋವಾದಿಂದ ಮಂಗಳೂರು ಕಡೆ ತೆರಳುತ್ತಿರುವಾಗ ಬೈಕ್‌ನಲ್ಲಿ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುದ್ದಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿದರಾದ್ರೂ ಅಷ್ಟೊತ್ತಿಗಾಗಲೇ ಬೈಕ್ ಸುಟ್ಟು ಕರಕಲಾಗಿತ್ತು. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details