ಜವರಾಯನ ಅಟ್ಟಹಾಸ : ದೇವರ ದರ್ಶನಕ್ಕೆ ಬಂದವ ಮಸಣ ಸೇರಿದ - ಕರಿಘಟ್ಟ ಅಪಘಾತ ಸುದ್ದಿ
ಹಾಸನ: ಪಾದಚಾರಿಯೊಬ್ಬರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಕರಿಘಟ್ಟ ಬಳಿ ಸಂಭವಿಸಿದೆ. ವಸಂತ (42) ಮೃತ ದುರ್ದೈವಿ. ಕತ್ತರಿಘಟ್ಟದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಮುಗಿಸಿ ವಾಪಸ್ ಸ್ವಗ್ರಾಮಕ್ಕೆ ತೆರಳುವ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಪಾದಾಚಾರಿ ತಲೆ ಎರಡು ಹೋಳಾಗಿ ಸ್ಥಳದಲ್ಲಿಯೇ ಭೀಕರವಾಗಿ ಸಾವಿಗೀಡಾಗಿದ್ದಾರೆ. ಘಟನೆಯಿಂದ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.