ಕರ್ನಾಟಕ

karnataka

ETV Bharat / videos

ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ: ಹೊತ್ತಿ ಉರಿದ ಲಾರಿ-ಕಾರು

By

Published : Apr 15, 2021, 1:30 PM IST

Updated : Apr 15, 2021, 1:56 PM IST

ಮೈಸೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಟೈರ್‌ ತುಂಬಿದ್ದ ಲಾರಿ ಹಾಗೂ ಮಡಿಕೇರಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ, ಎರಡೂ ವಾಹನಗಳು ಹೊತ್ತಿ ಉರಿದಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಸುಕಿನ ಜಾವ ನಡೆದಿದೆ. ಏಕಾ‌ಏಕಿ ವಾಹನಗಳಲ್ಲಿ ಬೆಂಕಿ‌ ಕಾಣಸಿಕೊಳ್ಳುತ್ತಿದಂತೆ ಕಾರು, ಲಾರಿ ಚಾಲಕ ಮತ್ತು ಕ್ಲೀನರ್ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಅಂದಾಜು 18 ಲಕ್ಷ ರೂ. ಮೌಲ್ಯದ ಟೈರ್ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ‌ನಂದಿಸುವಷ್ಟರಲ್ಲಿ ವಾಹನಗಳು ಸುಟ್ಟು ಕರಕಲಾಗಿದೆ.
Last Updated : Apr 15, 2021, 1:56 PM IST

ABOUT THE AUTHOR

...view details