ಚಿಕ್ಕಮಗಳೂರಿನಲ್ಲಿ ಲಾರಿ-ಬೈಕ್ ಅಪಘಾತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಚಿಕ್ಕಮಗಳೂರಿನಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ
ಚಿಕ್ಕಮಗಳೂರು: ನಗರದ ಎನ್ಎಂಸಿ ವೃತ್ತದಲ್ಲಿ ಲಾರಿ ಹಾಗೂ ಬೈಕ್ ನಡುವೆ ನಡೆದಿದ್ದ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿ ಹೋಗುತ್ತಿದ್ದ ವೇಳೆ ಬೈಕ್ ಸವಾರ ಲಾರಿಯ ಚಕ್ರಕ್ಕೆ ಸಿಲುಕಿದ ಪರಿಣಾಮ ಆತನ ಕಾಲಿನ ಮೇಲೆ ಲಾರಿ ಹರಿದಿತ್ತು. ಬೈಕ್ ಸವಾರ ಚಿಕ್ಕೇಗೌಡ ನರಳಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.