ಜೇವರ್ಗಿಯ ಕಿರಿಯ ಇಂಜಿನಿಯರ್ ಬಿರಾದಾರ್ ಮನೆ ಡ್ರೈನೇಜ್ ಪೈಪ್‌ನಲ್ಲಿ ಲಕ್ಷಗಟ್ಟಲೆ ರೊಕ್ಕ: ವಿಡಿಯೋ - ಲೋಕೋಪಯೋಗ ಇಲಾಖೆ ಕಿರಿಯ ಇಂಜಿನಿಯರ್
ಕಲಬುರಗಿಯ ಗುಬ್ಬಿ ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪ ವಿಭಾಗದ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರ ಅವರ ಮನೆಯ ಪೈಪ್‌ನಲ್ಲಿ ಬಚ್ಚಿಟ್ಟಿದ್ದ ಹಣವನ್ನು ಅಧಿಕಾರಿಗಳ ಪತ್ತೆ ಹಚ್ಚಿದ್ದು, ಪ್ಲಂಬರ್ ಮೂಲಕ ಪೈಪ್ ಕತ್ತರಿಸಿ ಅದರಲ್ಲಿದ್ದ ಸುಮಾರು 13 ಲಕ್ಷ ಹಣವನ್ನು ವಶಪಡಿಸಿಕೊಂಡರು. ಇಂದು ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸುವ ಬಗ್ಗೆ ಅನುಮಾನಗೊಂಡ ಶಾಂತಗೌಡ 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಪೈಪ್ನೊಳಗೆ ಹಣ ಎಸೆದಿದ್ದಾರೆ ಎಂದು ಹೇಳಲಾಗ್ತಿದೆ.
Last Updated : Nov 26, 2021, 2:34 PM IST