'ಫ್ರಿ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶಿಸಿದ ಯುವತಿ ಬಂಧನಕ್ಕೆ ಎಬಿವಿಪಿ ಆಗ್ರಹ - mysure protest news
ಮೈಸೂರು: ಮೈಸೂರು ವಿವಿ ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನಾ ವೇಳೆ 'ಫ್ರಿ ಕಾಶ್ಮೀರ' ಎಂದು ಭಿತ್ತಿಪತ್ರ ಪ್ರದರ್ಶಿಸಿದ ಯುವತಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಜೆಎಸ್‌ಎಸ್ ವಿದ್ಯಾಪೀಠ ವೃತ್ತದ ಬಳಿ ಎಬಿವಿಪಿ ಕಾರ್ಯಕರ್ತರೊಂದಿಗೆ ನೂರಾರು ವಿದ್ಯಾರ್ಥಿನಿಯರು ಬೃಹತ್ ಪ್ರತಿಭಟನೆ ನಡೆಸಿ, ಎಫ್‌ಐಆರ್ ಆದ ವಿದ್ಯಾರ್ಥಿ ಮುಖಂಡರನ್ನ ಬಂಧಿಸುವಂತೆ ಆಗ್ರಹಿಸಿದರು. ವಿವಿಯಲ್ಲಿ ಫ್ರಿ ಕಾಶ್ಮೀರ ಫಲಕ ಹಿಡದ ವಿದ್ಯಾರ್ಥಿನಿಯ ಬಂಧನವಾಗಬೇಕು. ಎಫ್‌ಐಆರ್ ದಾಖಲಾಗಿರುವ ವಿದ್ಯಾರ್ಥಿ ಮುಖಂಡರನ್ನು ಕ್ಯಾಂಪಸ್‌ನಿಂದ ಹೊರ ಹಾಕಬೇಕು. ಕೂಡಲೇ ಅವರುಗಳನ್ನು ಬಂಧಿಸುವಂತೆ ಒತ್ತಾಯಿಸಿದರು.