ಆನೆಗುಂದಿ ಉತ್ಸವ: ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಗಳ ಝಲಕ್ - Aanegundi festival sportes
ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಆನೆಗುಂದಿ ಉತ್ಸವದ ಹಿನ್ನೆಲೆ ವಿವಿಧ ಕ್ರೀಡಾ ಚಟುವಟಿಕೆಗಳು ಅನಾವರಣಗೊಂಡವು. ಅದರಲ್ಲಿ ಪ್ರಮುಖವಾಗಿ ಹಗ್ಗ ಜಗ್ಗಾಟ ಹಾಗೂ ಕೆಸರುಗದ್ದೆ ಓಟ ನೋಡುಗರಿಗೆ ಮನರಂಜನೆ ನೀಡಿದವು. ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಚಾಲನೆ ನೀಡಿದರು. ಇನ್ನು ಆನೆಗುಂದಿಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಯುವಕರಿಗಾಗಿ ಆಯೋಜನೆಗೊಂಡಿದ್ದ ಕೆಸರು ಗದ್ದೆ ಓಟದಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ಸಂಭ್ರಮಿಸಿದರು.