ರಸ್ತೆಯಲ್ಲಿ ಉಗುಳ್ತಾನೆ... ಪ್ರಶ್ನಿಸಿದವರಿಗೆ ಆವಾಜ್ ಹಾಕ್ತಾನೆ: ಬೆಂಗಳೂರಿನಲ್ಲಿ ಯುವಕನ ಮೊಂಡಾಟ! - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್
ಬೆಂಗಳೂರು: ಕೊರೊನಾ ಆತಂಕದ ನಡುವೆ ರೋಗ ಹರಡದಂತೆ ಸರ್ಕಾರ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಇಲ್ಲೊಬ್ಬ ಮಹಾನುಭಾವ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಉಗುಳಿದ್ದಾನೆ. ಅಷ್ಟೆ ಅಲ್ಲ ಉಗುಳಿದ್ದನ್ನು ಪ್ರಶ್ನೆ ಮಾಡಿದ್ರೆ ರಸ್ತೆ ನಿಮ್ಮಪ್ಪಂದಾ ಎಂದು ಜನರಿಗೆ ಆವಾಜ್ ಹಾಕಿರುವ ಘಟನೆ ಬಿ.ಟಿ.ಎಂ ಸೆಕೆಂಡ್ ಸ್ಟೇಜ್ನಲ್ಲಿ ನಡೆದಿದೆ. ಕೊರೊನಾ ಮಹಾಮಾರಿ ಮಾನವ ಸಂಕುಲವನ್ನು ಆತಂಕಕ್ಕೆ ಈಡು ಮಾಡಿದೆ. ಜನ ನಮಗೆ ಎಲ್ಲಿ ಈ ಕಿಲ್ಲರ್ ಮಹಾಮಾರಿ ಅಟ್ಯಾಕ್ ಮಾಡುತ್ತೋ ಎಂಬ ಭಯದಲ್ಲಿ ಜೀವನ ನಡಸುತ್ತಿದ್ದಾರೆ. ಆದರೆ ಈತ ಮಾತ್ರ ತನ್ನ ಮೊಂಡಾಟ ತೋರಿಸಿದ್ದಾನೆ.