ಕೊಡಗು: ಕೊರೊನಾ ಗೆದ್ದುಬಂದ ಪೊಲೀಸ್ಗೆ ಆತ್ಮೀಯ ಸ್ವಾಗತ - ಕೊಡಗು ಪೊಲೀಸ್ ನ್ಯೂಸ್
ಕೊಡಗು: ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಮಡಿಕೇರಿಯ ಡಿಎಆರ್ ಪೊಲೀಸ್ ಸಿಬ್ಬಂದಿ ಲೋಕೇಶ್ ಎಂಬುವರಿಗೆ ಜುಲೈ 11 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಅವರಿಗೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಗುಣಮುಖರಾಗಿ ಬಂದ ಲೋಕೇಶ್ ಅವರನ್ನು ಡಿಎಆರ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಶಾಲು ಹೊದಿಸಿ ಹೂವು ನೀಡಿ ಬಳಿಕ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಹೀಗೆ ಆತ್ಮೀಯವಾಗಿ ಸ್ವಾಗತಿಸಿದ್ದನ್ನು ಕಂಡು ಲೋಕೇಶ್ ಭಾವುಕರಾದರು.