ಊರಿಗೆ ಹೋಗಲು ರಸ್ತೆಯೇ ಇಲ್ಲ... ಬೀದಿಯಲ್ಲೇ ಗ್ರಾಮಸ್ಥರ ಜೀವನ! - ಮಲಪ್ರಭಾ ನದಿ
ಗದಗ ಜಿಲ್ಲೆಯಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಅನೇಕ ಗ್ರಾಮಗಳ ಜನರ ಜೀವನವೇ ಕೊಚ್ಚಿಹೋಗಿದೆ. ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಸಂಪರ್ಕವನ್ನೇ ಕಡಿದುಕೊಂಡಿದೆ. ಗ್ರಾಮಕ್ಕೆ ತೆರಳುವ ಸೇತುವೆ ಹಾಗೂ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಊರಿಗೆ ತೆರಳಲು ದಾರಿ ಇಲ್ಲದೇ ಗ್ರಾಮಸ್ಥರು, ದಾನಿಗಳಿಂದ ಪಡೆದ ಆಹಾರವನ್ನು ರಸ್ತೆಯಲ್ಲಿಯೇ ಸರತಿ ಸಾಲಿನಲ್ಲಿ ಕುಳಿತು ಸೇವಿಸುತ್ತಿದ್ದಾರೆ. ಒಟ್ಟಾರೆ ಮಹಾಮಳೆ ಇವರಿಗೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ.
Last Updated : Aug 16, 2019, 3:25 PM IST