ಕೊರೊನಾ ವಾರಿಯರ್ಸ್ಗೊಂದು ನಮನ....ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಅನಾವರಣಗೊಂಡಿದೆ ಮರಳಿನ ಕಲಾಕೃತಿ - hubli latest news
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರಿಗೆ ಗೌರವ ಸಮರ್ಪಣೆ ಮಾಡುವ ಮರಳು ಕಲಾಕೃತಿಯೊಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನಾವರಣಗೊಂಡಿದೆ. ಹೌದು, ಕಲಾವಿದ ಮಂಜುನಾಥ ಹಿರೇಮಠ ಎನ್ನುವವರು ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ನರ್ಸ್, ಪೊಲೀಸರು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರನ್ನು ಮರಳು ಕಲಾಕೃತಿಯಲ್ಲಿ ಬಿಂಬಿಸಿ, ಅವರನ್ನು ಗೌರವಿಸಿ ಎಂಬ ಸಂದೇಶ ನೀಡಿದ್ದಾರೆ. ಮರಳು ಕಲಾಕೃತಿಯ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.