ಲಖನ್ ಜಾರಕಿಹೊಳಿಗೆ ಜಯ: 500 ರೂ. ನೋಟುಗಳನ್ನು ತೂರಿದ ಬೆಂಬಲಿಗ - ಲಖನ್ ಜಾರಕಿಹೊಳಿಗೆ ಪರಿಷತ್ ಚುನಾವಣೆಯಲ್ಲಿ ಜಯ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಲಖನ್ ಜಾರಕಿಹೊಳಿ ಜಯ ಸಾಧಿಸಿದ್ದು, ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಬೆಂಬಲಿಗನೊಬ್ಬ, 500 ರೂ. ಮುಖ ಬೆಲೆಯ ಅಂದಾಜು 50 ಸಾವಿರ ಮೊತ್ತದ ನೋಟುಗಳನ್ನು ತೂರಿ ಸಂತಸ ಹಂಚಿಕೊಂಡಿದ್ದಾರೆ.