ತೊಗರಿ ಬೆಳೆಗೆ ವಿಚಿತ್ರ ರೋಗ, ಅನ್ನದಾತ ಕಂಗಾಲು - dal crop news of bidar
ಬೀದರ್: ಕೊರೊನಾ ಸಂಕಷ್ಟದ ನಡುವೆ ಸಾಲ ಮಾಡಿ ಮುಂಗಾರು ಹಂಗಾಮಿನ ಬಿತ್ತನೆ ಮಾಡಿದ ಜಿಲ್ಲೆಯ ರೈತರಿಗೆ ಸಂಕಷ್ಟಗಳ ಸರಮಾಲೆ ಬೆನ್ನು ಬಿಡದೆ ಕಾಡುತ್ತಿದೆ. ಅತಿವೃಷ್ಟಿಯಿಂದ ಸೋಯಾಬಿನ್ ಬೆಳೆ ನೀರು ಪಾಲಾದ್ರೆ, ರೈತರಿಗೆ ಪರ್ಯಾಯವಾಗಿ ಬೆಳೆದ ತೊಗರಿ ವಾಣಿಜ್ಯ ಬೆಳೆಗೆ ಬೇರು ನಾಶಕ ರೋಗ ಬಾಧೆ ತಗುಲಿ ಒಣಗಿ ಕರಕಲಾಗಿದೆ. ಒಂದೊಂದು ತೊಗರಿ ಗದ್ದೆಗಳಲ್ಲಿ ಶೇ.50ರಷ್ಟು ಭಾಗ ಕಳೆದ ಒಂದು ವಾರಲ್ಲೇ ವಿಚಿತ್ರ ರೋಗಬಾಧೆಗೆ ತುತ್ತಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ ನೋಡಿ..