ಕಲ್ಯಾಣ ಪರ್ವ.. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕೆ ದೃಢ ಸಂಕಲ್ಪ..! - ಬಸವಕಲ್ಯಾಣದಲ್ಲಿ ನಡೆದ ಕಲ್ಯಾಣ ಪರ್ವ
ಬಸವಕಲ್ಯಾಣದಲ್ಲಿ ನಡೆದ ಕಲ್ಯಾಣ ಪರ್ವದ ಕೊನೆಯ ದಿನವಾದ ಇಂದು ನಗರದಲ್ಲಿ ವೈಭವದ ಪಥಸಂಚಲನ ಜರುಗಿತು. ಇದೇ ವೇಳೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಲಿ ಎಂದು ಗುರು ಬಸವಣ್ಣನವರ ಪವಿತ್ರ ಪರುಷಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಹಾ ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಗರದ ಪರುಷಕಟ್ಟೆಗೆ ತೆರಳಿದ ಬಸವಾಭಿಮಾನಿಗಳು, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಪ್ರಾರ್ಥನೆ ಸಲ್ಲಿಸಿ, ಸಂವಿಧಾನಿಕ ಮಾನ್ಯತೆ ಸಿಗುವವರೆಗೆ ಹೋರಾಟ ಮಾಡುವಂತೆ ಸಂಕಲ್ಪ ಮಾಡಲಾಯಿತು. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಸದ್ಗುರು ಬಸವಪ್ರಭು ಸ್ವಾಮೀಜಿ ಸೇರಿ ಪೂಜ್ಯರು, ಮಾತೆಯರು, ಬಸವ ಭಕ್ತರು ಪಾಲ್ಗೊಂಡಿದ್ದರು.