ಅಕ್ಷರ ಜಾತ್ರೆಗೆ 700 ಕಿ.ಮೀ. ದೂರದಿಂದ ಬಂದ ವಿಶೇಷ ಚೇತನ: ಹೇಗಿದೆ ನೋಡಿ ಇವ್ರ ಕನ್ನಡಾಭಿಮಾನ - ಮೈಸೂರಿನವರಾದ ಇವರು ಪೊಲಿಯೋ ಅಟ್ಯಾಕ್
ಕಲಬುರಗಿ: ಈತ ಕನ್ನಡದ ಅಪ್ಪಟ ಪ್ರೇಮಿ, ಮೂಲತಃ ಮೈಸೂರಿನವರಾದ ಇವರು ರಮೇಶ್ ವಿಶೇಷ ಚೇತನರಾಗಿದ್ದಾರೆ. ಇವರ ವಿಶೇಷ ಗುಣವೆಂದರೆ ರಾಜ್ಯದ ಎಲ್ಲಿಯೇ ಕನ್ನಡಮ್ಮನ ಜಾತ್ರೆ ನಡೆದರು ಅಲ್ಲಿ ಹಾಜರಿರುತ್ತಾರೆ. ಇದೀಗ ಕಲಬುರಗಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 700 ಕಿ.ಮೀ ದೂರದ ಮೈಸೂರಿನಿಂದ ಕಲಬುರಗಿಗೆ ತಮ್ಮ ತ್ರಿಚಕ್ರ ವಾಹನದಲ್ಲಿ ಬಂದಿದ್ದಾರೆ. ಕನ್ನಡದ ಕುರಿತಾಗಿ ರಮೇಶ್ ಈಟಿವಿ ಭಾರತನೊಂದಿಗೆ ಮಾತನಾಡಿದ್ದಾರೆ.