ಸೇನೆಯಲ್ಲಿ ಸೋಲ್ಜರ್.. ಊರಿಗೆ ಬಂದ್ರೆ ಯುವಕರಿಗೆ ಟೀಚರ್...ಇವರ ಕಾರ್ಯಕ್ಕೆ ಊರಿಗೂರೇ ಸೆಲ್ಯೂಟ್ - ಭಾರತೀಯ ಸೇನೆಯಲ್ಲಿದ್ರೆ ಕೋಬ್ರಾ, ರಜೆ ಮೇಲೆ ಊರಿಗೆ ಬಂದ್ರೆ ತರಬೇತಿ ನೀಡುವ ಮಾರ್ಗದರ್ಶಕ
🎬 Watch Now: Feature Video
ಭಾರತೀಯ ಸೇನೆಯಲ್ಲಿದ್ರೆ ಇವರು ಕೋಬ್ರಾ.. ರಜೆ ಮೇಲೆ ಊರಿಗೆ ಬಂದ್ರೆ ತರಬೇತಿ ನೀಡುವ ಮಾರ್ಗದರ್ಶಕ. ಯುವಕರಿಗೆ ಸ್ಫೂರ್ತಿಯಾಗಿರುವ ಈ ಸಿಆರ್ಪಿಎಫ್ ಯೋಧ ಅನಂತ್ ರಾಜ್ ಗೋಪಾಲ್. ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಶನ್ ಅಂದ್ರೆ ಕೋಬ್ರಾ ತರಬೇತಿ ಪಡೆದಿರೋ ದೊಡ್ಡಬಳ್ಲಾಪುರ ತೂಬಗೆರೆಯ ಅನಂತ್ ರಾಜ್ ಗೋಪಾಲ್ ಸದ್ಯ ಛತ್ತೀಸ್ಘಡದ ನಕ್ಸಲ್‌ಪೀಡಿತ ಪ್ರದೇಶದಲ್ಲಿ ಯೋಧನಾಗಿ ಸೇವೆ ಸಲ್ಲಿಸ್ತಿದ್ದಾರೆ. ಇವ್ರು ರಜೆಯ ಮೇಲೆ ಊರಿಗೆ ಬಂದ್ರೂ ಯುವಕರಿಗೆ ಸೇನೆಯ ತರಬೇತಿ ನೀಡ್ತಾರೆ.