ಪಾರಂಪರಿಕ ಕಡಲೆಕಾಯಿ ಪರಿಷೆ ಈ ಬಾರಿ ಸರಳ ಆಚರಣೆ : ಭಕ್ತರ ಸಂಖ್ಯೆಯೂ ಕಡಿಮೆ - ಕಡಲೆಕಾಯಿ ಪರಿಷೆ ಸರಳ ಆಚರಣೆ
ಬೆಂಗಳೂರು : ಪಾರಂಪರಿಕ ವಿಶೇಷವಾದ ಕಡಲೆಕಾಯಿ ಪರಿಷೆ ಬೆಂಗಳೂರು ನಗರದ ದೊಡ್ಡಬಸವಣ್ಣ ದೇವಸ್ಥಾನದಲ್ಲಿ ಸರಳ ಆಚರಣೆಯ ಮೂಲಕ ಆರಂಭಗೊಂಡಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಹಾಗೂ ಮಹಾಮಂಗಳಾರತಿಯ ಪೂಜೆ ಸಲ್ಲಿಸಲಾಗಿದೆ. ಆದರೆ ಕೋವಿಡ್ ಹಿನ್ನೆಲೆ ಕಡಲೆಕಾಯಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬಸ್ ಮುಷ್ಕರ ಹಿನ್ನಲೆ, ಜೊತೆಗೆ ಕೋವಿಡ್ ಭೀತಿ ಇರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ.