ಮಾಂಜ್ರಾ ಸೇತುವೆಯ ಒಂದು ಭಾಗ ಕುಸಿತ, ಪ್ರಯಾಣಿಕರಲ್ಲಿ ಆತಂಕ; ಪ್ರತ್ಯಕ್ಷ ವರದಿ...! - ಬೀದರ್
ಬೀದರ್: ಬೀದರ್-ನಾಂದೇಡ್ ಹೆದ್ದಾರಿ ನಡುವಿನ ಔರಾದ್ ತಾಲೂಕಿನ ಕೌಠಾ ಗ್ರಾಮದ ಬಳಿಯ ಮಾಂಜ್ರಾ ಸೇತುವೆಯ ಒಂದು ಭಾಗ ಭಾಗಶಃ ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ವರ್ಷವಷ್ಟೇ ದುರಸ್ತಿ ಮಾಡಿದ ಸೇತುವೆ ಮಳೆಗೆ ಕುಸಿದಿದ್ದು, ಗುತ್ತಿಗೆದಾರನ ಕಳಪೆ ಕಾಮಗಾರಿಯ ಮುಖವಾಡ ಬಯಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲವಾದ್ರೂ ಭಾರೀ ದುರಂತವೊಂದು ತಪ್ಪಿಹೊಗಿದೆ. ಈ ಘಟನೆಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.