ಉಡುಪಿಯಲ್ಲಿ ಅಪರೂಪದ ದೈತ್ಯಾಕಾರದ ಅಲ್ಪಾಯುಷ್ಯದ ಪತಂಗ ಪತ್ತೆ! - Udupi butterfly news
ಉಡುಪಿ: ಅಲೆವೂರು ಗ್ರಾಮದಲ್ಲಿ ಅಪರೂಪದ 8 ಇಂಚಿನ ಪತಂಗವೊಂದು ಕಾಣಿಸಿಕೊಂಡಿದೆ. ಈ ದೈತ್ಯಾಕಾರದ ಪತಂಗವನ್ನು ವೈಜ್ಞಾನಿಕವಾಗಿ ಅಟ್ಲಾಸ್ ಎನ್ನಲಾಗುತ್ತದೆ. ರೆಕ್ಕೆಯ ವಿಸ್ತೀರ್ಣ 20-23 ಸೆ.ಮೀ ಇದ್ದು, ಪೇರಳೆ, ಸಂಪಿಂಗೆ ಕೆಲವೊಂದು ಸೀಮಿತ ಜಾತಿಯ ಮರದ ಎಲೆಗಳಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತೆ. ಮೊಟ್ಟೆಯಿಂದ ಹೊರ ಬರುವ ಹುಳ ಮರದ ಎಲೆ ಸೇವಿಸಿ ಕೋಶವನ್ನು ರಚಿಸುತ್ತದೆ. ಅದರಿಂದ ಹೊರಬರುವ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ. ವಿಶೇಷ ಎಂದರೆ ಈ ಪತಂಗಕ್ಕೆ ಬಾಯಿ, ಜಿರ್ಣಾಂಗ ವ್ಯವಸ್ಥೆ ಇಲ್ಲ. ಆದ್ದರಿಂದ ಕೋಶದಿಂದ ಹೊರಬಂದು ಪೂರ್ಣ ಅವಸ್ಥೆ ಬಂದ ನಂತರ ಏನೂ ತಿನ್ನಲ್ಲ. ಇದಕ್ಕೆ ಬೇಕಾದ ಎಲ್ಲ ಶಕ್ತಿಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟು ಕೊಳ್ಳುತ್ತದೆ. ಹೀಗಾಗಿ ಒಂದು ಅಥವಾ ಎರಡು ವಾರ ಮಾತ್ರ ಬದುಕಿರುತ್ತದೆ. ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಅದು ತುಂಬಾ ಬಲಹೀನವಾದಗ ಹಕ್ಕಿ ,ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎನ್ನುತ್ತಾರೆ ಚಿಟ್ಟೆ ತಜ್ಞ ಪಿಎಲ್ ನಸೀರ್.