ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಟೆಂಡರ್ ಮಾಫಿಯಗೆ ಬ್ರೇಕ್ ಹಾಕಿದ ಖಡಕ್ ಅಧಿಕಾರಿ - undefined
ರಾಮನಗರ: ಸರ್ಕಾರಿ ಉದ್ಯೋಗಿಯೊಬ್ಬರು ಮನಸ್ಸು ಮಾಡಿದರೆ ಏನೆಲ್ಲಾ ಕಾರ್ಯಕ್ರಮಗಳನ್ನು ಪ್ರಗತಿಗೆ ತರಬಹುದು ಎನ್ನುವುದಕ್ಕೆ ನಗರದ ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ಮಾಡಿ ತೋರಿಸಿದ್ದು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಂಕ್ರಪ್ಪ ಎನ್ನುವವರು ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲೇ ಬೆರಳ ತುದಿಯಲ್ಲೇ ಟೆಂಡರ್ ಪ್ರಕಟಣೆ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇಲಾಖೆಯಲ್ಲಿ ಸೋರಿಕೆ ಆಗುತ್ತಿದ ಟೆಂಡರ್ ಮಾಫಿಯಾಗೆ ಬ್ರೇಕ್ ಹಾಕಿದ್ದಾರೆ. ಅವರು ಜಾರಿಗೆ ತಂದಿರುವ ಯೋಜನೆ ಕುರಿತ ಮಾಹಿತಿಯನ್ನು 'ಈಟಿವಿ ಭಾರತ್'ನೊಂದಿಗೆ ಹಂಚಿಕೊಂಡಿದ್ದಾರೆ.