ಪಿತ್ರಾರ್ಜಿತ ನಿವೇಶನ ಮಾರಾಟ ಮಾಡುವಂತೆ ವಿದ್ಯುತ್ ಕಂಬ ಏರಿ ನಿಂತ ಭೂಪ..! - man climbed power pole
ಮೈಸೂರು: ವ್ಯಕ್ತಿಯೊಬ್ಬ ತನ್ನ ಅಣ್ಣ ನಿವೇಶನ ಮಾರಲು ಬಿಡುತ್ತಿಲ್ಲ ಎಂದು ವಿದ್ಯುತ್ ಕಂಬ ಏರಿ ನಿಂತ ಘಟನೆ ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ವೆಂಕಟೇಶ್ ಎಂಬಾತನೇ ವಿದ್ಯುತ್ ಕಂಬ ಏರಿದ ಭೂಪ. ಪಿತ್ರಾರ್ಜಿತ ನಿವೇಶನ ಮಾರಿ ಹಣ ಕೊಡುವಂತೆ ಅಣ್ಣ ಶಿವಣ್ಣನ ಬಳಿ ಒತ್ತಾಯ ಮಾಡಿದ್ದು ಇದಕ್ಕೆ ಅಣ್ಣ ಒಪ್ಪುತ್ತಿಲ್ಲ. ನಿವೇಶನ ಮಾರಲೂ ಸಹ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿದ್ಯುತ್ ಕಂಬ ಏರಿದ್ದಾರೆ. ಗ್ರಾಮಸ್ಥರು ವೆಂಕಟೇಶನ ಮನವೊಲಿಸಿ ನಿವೇಶನ ಮಾರಿಸಿ ಹಣ ಕೊಡಿಸುವ ಭರವಸೆ ನೀಡಿ ಕೆಳಗೆ ಇಳಿಸಿದ್ದಾರೆ. ಈ ಸಂದರ್ಭ ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಅನಾಹುತ ತಪ್ಪಿದೆ.
Last Updated : Nov 29, 2020, 1:42 PM IST