ನಮ್ಗೆ ನೆರಳು ಕೊಡುವ ನಿಮ್ಗೇ ನೀರು ಹಾಕೋದಿಲ್ವೇ.. ಕೊರೊನಾ ಇದ್ರೂ ನಿಲ್ಲದ ಸಮಾಜ ಸೇವೆ! - Lockdown
ಲಾಕ್‌ಡೌನ್‌ನಿಂದಾಗಿ ಮನುಷ್ಯರಷ್ಟೇ ಅಲ್ಲ, ಪ್ರಕೃತಿಯಲ್ಲಿನ ಪ್ರತಿ ಜೀವ ಸಂಕುಲವೂ ಸಂಕಷ್ಟಕ್ಕೆ ಸಿಲುಕಿದೆ. ರಾಯಚೂರಿನ ರಸ್ತೆ ವಿಭಜಕಗಳಲ್ಲಿರೋ 500ಕ್ಕೂ ಹೆಚ್ಚು ಗಿಡಗಳಿಗೆ ಇಲ್ಲೊಬ್ಬ ಸಮಾಜ ಸೇವಕರು ನಿತ್ಯ ನೀರುಣಿಸುತ್ತಿದ್ದಾರೆ. ಸ್ವತಃ ತಾವೇ ಟ್ಯಾಂಕರ್ ಮೂಲಕ ಸಸಿ, ಗಿಡಮರಗಳಿಗೆ ನೀರುಣಿಸುವ ಪುಣ್ಯದ ಕೆಲಸ ಮಾಡ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ನೀಡಿದ್ದಾರೆ.