ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ: ಏಕಾಏಕಿ ನೀರು ಬಿಟ್ಟಿದ್ದರಿಂದ ಅವಘಡ - ವ್ಯಕ್ತಿಯೋರ್ವ ಕೊಚ್ಚಿ ಹೋದ
ಧಾರವಾಡ: ಸೇತುವೆ ಕೆಳಗೆ ಸಿಲುಕಿದ ವ್ಯಕ್ತಿಯೋರ್ವ ಕೊಚ್ಚಿ ಹೋದ ಘಟನೆ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಮಡಿವಾಳಪ್ಪ ಜಕ್ಕನವರ ಕೊಚ್ಚಿಹೋದ ವ್ಯಕ್ತಿ, ಆಕಳು ಮೇಯಿಸಲು ಹೋಗಿ ಮಳೆ ರಕ್ಷಣೆಗಾಗಿ ಸೇತುವೆ ಕೆಳಗೆ ನಿಂತಿದ್ದರು. ಏಕಾಏಕಿ ಸೇತುವೆಗೆ ನೀರು ಜಾಸ್ತಿಯಾಗಿ ತೇಲಿ ಹೋಗಿದ್ದಾನೆ. ಸ್ಥಳಕ್ಕೆ ಶಾಸಕ ಅಮೃತ್ ದೇಸಾಯಿ ಭೇಟಿ ನೀಡಿದ್ದು, ತಹಶೀಲ್ದಾರ್ ಹಾಗೂ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರೆದಿದೆ.