ಮರದಿಂದ ಕೆಳಗೆ ಬಿದ್ದ ಬಾತುಕೋಳಿಯ ರಕ್ಷಣೆ.. - ಬಾತುಕೋಳಿ ರಕ್ಷಣೆ
ಅಮ್ಮಿನಬಾವಿ ಹತ್ತಿರ ಮರದಲ್ಲಿ ಸಿಲುಕಿದ್ದ ಬಾತುಕೋಳಿಯೊಂದನ್ನು ರಕ್ಷಿಸಿ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಬಸವರಾಜ ಸಿದ್ದವೀರಣ್ಣವರ ಎಂಬುವರು ಬಾತುಕೋಳಿ ರಕ್ಷಿಸಿದವರು. ಗಂಟೆಗೂ ಹೆಚ್ಚು ಕಾಲ ಮರದಲ್ಲಿ ಸಿಲುಕಿಕೊಂಡ ಬಾತುಕೋಳಿ, ಕೆಳಗೆ ಬಿದ್ದು ಗಾಯಗೊಂಡಿದೆ. ಬಸವರಾಜ ಬಾತುಕೋಳಿಯ ಗಾಯಕ್ಕೆ ಅರಿಶಿನ ಹಚ್ಚಿದ್ದಾರೆ.