ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದ ವ್ಯಕ್ತಿ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಬೆಂಗಳೂರು: ಲಾಕ್ಡೌನ್ ಆದೇಶದಿಂದಾಗಿ ಬಡ ಕಾರ್ಮಿಕರು ಹಾಗೂ ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇವರ ಹಸಿವನ್ನು ನೀಗಿಸಲು ಇಲ್ಲೊಬ್ಬರು ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ. ಪೀಜನ್ ಕೋರಿಯರ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಚಂದರ್ ಎಂಬುವರು ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನಲ್ಲಿರುವ ಬಡ ಕಾರ್ಮಿಕರಿಗೆ ಊಟ ನೀಡುವ ಮೂಲಕ ಹಸಿದ ಹೊಟ್ಟೆ ತುಂಬಿಸಿದ್ದಾರೆ. ಊಟ ವಿತರಿಸುವಾಗ ಸರದಿ ಸಾಲಿನಲ್ಲಿ ಪ್ರತಿಯೊಬ್ಬರನ್ನೂ ಎರಡು ಮೂರು ಅಡಿಗಳ ಅಂತರದಲ್ಲಿ ನಿಲ್ಲಿಸಿ ಕೊರೊನಾ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.