ಇದು ಬರೇ ಸ್ಕೂಟರ್ ಅಲ್ಲ, ಕನ್ನಡಮ್ಮನ ಸೇವೆಯ ತೇರು... ಇಲ್ಲಿದ್ದಾನೆ ವಿಶಿಷ್ಟ ಕನ್ನಡಾಭಿಮಾನಿ..! - ಕಲಬುರಗಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ
85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಕಲಬುರಗಿಯಲ್ಲಿ ನಡೆಯಲಿರೋ ಈ ನುಡಿ ಹಬ್ಬಕ್ಕೆ ರಾಜ್ಯದ ವಿವಿಧೆಡೆಯಿಂದ ಕನ್ನಡಿಗರು ಸಾಗರೋಪಾದಿಯಲ್ಲಿ ಬಂದು ಸೇರಲಿದ್ದಾರೆ. ಇಲ್ಲಿಗೆ ಬರುವ ಕೆಲ ಅಭಿಮಾನಿಗಳಂತೂ ಊಹೆಗೂ ಮೀರಿದ ನುಡಿಪ್ರೀತಿ ಮೆರೆಯುತ್ತಾರೆ. ಅಂಥವರ ಸಾಲಿನಲ್ಲಿ ಬರೋ ಈ ಯುವಕ ಕೂಡಾ ನಮಗೆ ವಿಶಿಷ್ಟವಾಗಿ ಕಾಣುತ್ತಾನೆ.