ಮಾಸ್ಕ್ ಹಾಕುವಂತೆ ಹೇಳಿದ ಮಹಿಳಾ ಪಿಡಿಒಗೆ ಅವಾಚ್ಯ ಪದಗಳಿಂದ ನಿಂದನೆ - pdo pushpalatha
ಹೊಸಕೋಟೆ:ಮಾಸ್ಕ್ ಹಾಕುವಂತೆ ಹೇಳಿದ ಮಹಿಳಾ ಪಿಡಿಒಗೆ ವ್ಯಕ್ತಿಯೋರ್ವ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಅತಂಕಕಾರಿಯಾಗಿ ಬೆಳೆಯುತ್ತಿರುವ ನಡುವೆ ಇದನ್ನು ನಿಯಂತ್ರಣ ಮಾಡಲು ಗ್ರಾಮೀಣ ಭಾಗದಲ್ಲಿ ಪಿಡಿಒಗಳು ಮಾಸ್ಕ್ ಕಾರ್ಯಚರಣೆಗೆ ಇಳಿದು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಭೂಪ ಮಾಸ್ಕ್ ಹಾಕುವುದಿಲ್ಲ ಏನು ಮಾಡುತ್ತಿಯಾ? ಎಂದು ಮಹಿಳಾ ಪಿಡಿಒ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಪಿಡಿಒ ಪುಷ್ಪಲತಾ ಮತ್ತು ಸಿಬ್ಬಂದಿ ವಿರುದ್ಧ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಚೀಮಸಂದ್ರ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ರಾಮಗೋವಿಂದಪುರದ ನಿವಾಸಿ ಮುನಿರಾಜ್ ಎಂಬಾತ ಈ ರೀತಿ ನಡೆದುಕೊಂಡಿದ್ದಾನೆ. ಈ ಸಂಬಂಧ ದೂರು ನೀಡುವುದಾಗಿ ಪಿಡಿಒ ತಿಳಿಸಿದ್ದಾರೆ.