ಅಪ್ಪು ನೆನೆದು ಕಣ್ಣೀರು ಸುರಿಸಿದ ಪುಟ್ಟ ಬಾಲಕಿ.. ವಿಡಿಯೋ ವೈರಲ್ - ಹುಬ್ಬಳ್ಳಿಯಲ್ಲಿ ಪುನೀತ್ ರಾಜ್‍ಕುಮಾರ್ ನೆನೆದು ಕಣ್ಣೀರು ಸುರಿಸಿದ ಪುಟ್ಟ ಬಾಲಕಿ ವಿಡಿಯೋ ವೈರಲ್
ಪುನೀತ್ ರಾಜ್‍ಕುಮಾರ್ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಅಪ್ಪು ಹಿರಿಯರು ಮಾತ್ರವಲ್ಲದೆ ಸಣ್ಣ ಸಣ್ಣ ಮಕ್ಕಳ ಅಭಿಮಾನಿ ಬಳಗ ಕೂಡ ಸಾಕಷ್ಟಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೊಬ್ಬ ಬಾಲಕಿ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣದ ಸುದ್ಧಿ ಕೇಳಿ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ವೈರಲ್ ಆಗಿದೆ. ದಾನೇಶ್ವರಿ ಶಿರಕೋಳ ಎಂಬ ಬಾಲಕಿ ಪುನೀತ್ ಅವರ ಅಪ್ಪಟ ಅಭಿಮಾನಿ, ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳತೊಡಗಿದ್ದಾಳೆ. ಮನೆಯವರು ಎಷ್ಟೇ ಸಮಾಧಾನ ಮಾಡಿದರೂ ಈ ಪುಟ್ಟ ಬಾಲಕಿ ಮಾತ್ರ ಪುನೀತ್ ರಾಜ್‍ಕುಮಾರ್ ನೆನೆದು ಭಾವುಕಳಾಗಿ ಕಣ್ಣೀರು ಸುರಿಸಿದ್ದಾಳೆ.
TAGGED:
Puneeth Ramkumar