ಮೂವರ ಮೇಲೆ ದಾಳಿ... ಹೆಚ್.ಡಿ. ಕೋಟೆಯಲ್ಲಿ ಮನೆಗೆ ನುಗ್ಗಿದ್ದ ಚಿರತೆ ಸೆರೆ! - undefined
ಗಾಯಗೊಂಡ ಚಿರತೆಯೊಂದು ಆಹಾರ ಅರಸಿ ಗ್ರಾಮಕ್ಕೆ ನುಗ್ಗಿ ಮೂವರ ಮೇಲೆ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಳಿಕ ಜನರನ್ನ ಕಂಡು ಗಾಬರಿಗೊಂಡ ಚಿರತೆ ಮನೆಯೊಂದರ ಬಚ್ಚಲು ಮನೆಯಲ್ಲಿ ಅವಿತು ಕುಳಿತಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.