ಕಾರವಾರ: ನಾಯಿ ಹಿಡಿಯಲು ಬಂದು ಕೋಳಿ ಹೊತ್ತೊಯ್ದ ಚಿರತೆ... ವಿಡಿಯೋ - ನಾಳೆ ಮೇಲೆ ದಾಳಿ
ಕಾರವಾರ: ನಾಯಿ ಬೊಗಳುವುದನ್ನ ಕೇಳಿ ಅಲ್ಲಿಗೆ ಬಂದ ಚಿರತೆಯೊಂದು ಶ್ವಾನ ಸಿಗದೇ ಕೋಳಿ ಹೊತ್ತೊಯ್ದಿರುವ ಘಟನೆ ಅಂಕೋಲಾ ತಾಲೂಕಿನ ಕೊಂಡಳ್ಳಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಂಡಳ್ಳಿ ಗ್ರಾಮದ ರಮಾನಂದ ಎಂಬುವವರ ಮನೆಯ ಬಳಿ ಬೆಳಗಿನ ಜಾವ ಆಗಮಿಸಿದ್ದ ಚಿರತೆಯೊಂದು ನಾಯಿ ಬೊಗಳುವ ಕಡೆ ತೆರಳಿ ಹುಡುಕಾಟ ನಡೆಸಿದೆ. ಆದರೆ ನಾಯಿ ಸಿಗದ ಹಿನ್ನೆಲೆಯಲ್ಲಿ ಅಲ್ಲೆ ಗೂಡಿನೊಳಗಿದ್ದ ಕೋಳಿ ಹಿಡಿದು ಕಾಡಿನತ್ತ ಓಡಿದೆ.