ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ: ಶಾ ಭೇಟಿಗೆ ಅವಕಾಶ ಕೊಡಿ ಅಂತಾ ಪೊಲೀಸರೊಂದಿಗೆ ಮಹಿಳೆ ಕಿರಿಕ್ - ಬೆಳಗಾವಿ ಇತ್ತೀಚಿನ ಸುದ್ದಿ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ನನಗೆ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಕೊಡಿ ಎಂದು ಪೊಲೀಸರ ಜೊತೆಗೆ ಮಹಿಳೆವೋರ್ವರು ಕಿರಿಕ್ ಮಾಡಿಕೊಂಡಿದ್ದಾರೆ. ಪ್ರವಾಸಿಮಂದಿರದ ಎದುರು ಬೈಲಹೊಂಗಲ ಮೂಲದ ದಾನಮ್ಮ ಮೆಟಗುಡ್ಡ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿರುವ ಮಹಿಳೆ. ಶಾ ಆಗಮನದ ವಿಚಾರ ತಿಳಿದ ಇವರು ಪ್ರವಾಸಿ ಮಂದಿರಕ್ಕೆ ಬಂದಿದ್ದರು. ಪೊಲೀಸರು ಮನವೊಲಿಸಿದರೂ ಜಗ್ಗದ ಮಹಿಳೆ ಒಳಗೆ ಬಿಡುವಂತೆ ಪಟ್ಟು ಹಿಡಿದರು. ನಾನು ಎಂಪಿ ಟಿಕೆಟ್ ಆಕಾಂಕ್ಷಿ. ಒಳಗೆ ಬಿಡಿ ಎಂದು ಮಹಿಳಾ ಕಾರ್ಯಕರ್ತೆ ಪಟ್ಟುಹಿಡಿದರು. ಇದರಿಂದ ಬೇಸತ್ತ ಪೊಲೀಸರು ಲಿಸ್ಟ್‌ನಲ್ಲಿ ಹೆಸರಿದ್ದವರನ್ನು ಮಾತ್ರ ಒಳಬಿಡುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಮಹಿಳಾ ಕಾನ್ಸ್ಟೇಬಲ್ಗಳ ಜೊತೆ ವಾಗ್ವಾದ ನಡೆಸಿದ ಮಹಿಳೆಯನ್ನು ಬಳಿಕ ಹೊರಗೆ ಕಳುಹಿಸಿದ್ದಾರೆ.