ಕೊರೊನಾ ಬಗ್ಗೆ ಜಾಗೃತಿಗಾಗಿ ವಿಭಿನ್ನ ಹೆಲ್ಮೆಟ್ ಧರಿಸಿ ರಸ್ತೆಗಿಳಿದ ಯುವಕರ ತಂಡ - hubballi corona
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿರುವ ನಡುವೆ ನಗರದ ಟೀಮ್ ಸ್ಮೈಲ್ ಯುವಕರ ತಂಡವೊಂದು ವಿಭಿನ್ನ ರೀತಿಯಲ್ಲಿ ಜಾಗೃತಿಗಿಳಿದಿದೆ. ನಗರದ ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಸ್ಥಳದಲ್ಲಿ ಮಾಸ್ಕ್ ಹಾಕದೇ ಓಡಾಡುತ್ತಿದ್ದ ಜನರಿಗೆ ಮಾಸ್ಕ್ ನೀಡಿ, ಜಾಗೃತವಾಗಿರುವಂತೆ ತಿಳಿಹೇಳುತ್ತಿದ್ದಾರೆ. ವಿಶೇಷವೆಂದರೆ ಈ ಯುವಕರು ಕೊರೊನಾದಂತಹ ವೇಷ ಧರಿಸಿ ರಸ್ತೆಗಿಳಿದಿದ್ದು, ತಲೆಗೆ ಕೊರೊನಾ ಹೆಲ್ಮೆಟ್ ಹಾಕಿಕೊಂಡು ಜನರ ಬಳಿ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.