ರಕ್ಷಣಾ ಕಾರ್ಯ ವೇಳೆ ಮಾನವೀಯತೆ ದರ್ಶನ.. ಬೆಕ್ಕಿನ ಮರಿ ರಕ್ಷಿಸಿದ ಮುದ್ದು ಬಾಲೆ - udupi latest nes
ಉಡುಪಿ: ಎನ್ಡಿಆರ್ಎಫ್ ತಂಡ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಮಾಡುತ್ತಿದ್ರೆ, ಇಲ್ಲೊಬ್ಬ ಬಾಲಕಿ ತನ್ನ ಮೆಚ್ಚಿನ ಬೆಕ್ಕಿನ ಮರಿ ರಕ್ಷಣೆ ಮಾಡಿ ಖುಷಿಪಟ್ಟಿದ್ದಾಳೆ. ಪೆರಂಪಳ್ಳಿಯ ಪಾಸ್ಕುದ್ರುವಿನಲ್ಲಿ 20ಕ್ಕೂ ಅಧಿಕ ಕುಟುಂಬ ಪ್ರವಾಹಕ್ಕೆ ಸಿಲುಕಿದ್ದವು. ಸ್ಥಳಕ್ಕೆ ದೌಡಾಯಿಸಿದ ಎನ್ಡಿಆರ್ಎಫ್ ತ್ವರಿತ ಕಾರ್ಯಾಚರಣೆ ಮೂಲಕ ಎಲ್ಲರನ್ನೂ ರಕ್ಷಿಸಿದ್ದಾರೆ. ರಕ್ಷಣೆಯಾಗಿ ಬಂದ ಈ ಬಾಲಕಿಯ ಕೈಯಲ್ಲಿ ಬೆಕ್ಕಿನ ಮರಿ ಬೆಚ್ಚಗೆ ಮಲಗಿದ್ದು ಕಂಡು ಅಲ್ಲಿದ್ದವರು ಆಕೆಯ ಬೆನ್ನು ತಟ್ಟಿದ್ದು ಕಂಡು ಬಂತು.