ಕಲಬುರಗಿ: ವಿಧಿ ವಿಧಾನದಂತೆ ಕೋತಿ ಅಂತ್ಯ ಸಂಸ್ಕಾರ - monkey
ಕಲಬುರಗಿ: ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಕೋತಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮಸ್ಥರು ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೇರವೇರಿಸಿದ್ದಾರೆ. ಗ್ರಾಮದ ಸಮೀಪದ ರೇಣುಕಾ ಶುಗರ್ಸ್ನ ಪಂಪ್ಹೌಸ್ ಆವರಣದಲ್ಲಿ ಕರೆಂಟ್ ಶಾಕ್ ಹೊಡೆದಿದ್ದರಿಂದ ಕೋತಿ ಸಾವನ್ನಪ್ಪಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಮೃತ ಕೋತಿಯ ಕಳೆ ಬರವನ್ನು ಗ್ರಾಮಕ್ಕೆ ತಂದು ಜೇವರ್ಗಿಯ ಸೊನ್ನ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ನೇರವೇರಿಸಿ, ಬಳಿಕ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಶ್ರೀರಾಮ ಸೇನೆಯ ಕಟ್ಟೆ ಮೇಲೆ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನಡೆಸಿದರು.